ನೀವು ಡೆವಲಪರ್ ಆಗಿರುವಿರಾ?
ನಿಮ್ಮ Chrome ಆ್ಯಪ್ಗಳನ್ನು ಪ್ರಕಟಿಸಿನಾವು 27ನೇ ಜನವರಿ, 2024 ರಂದು ನಮ್ಮ ಸೇವಾ ನಿಯಮಗಳನ್ನು ಅಪ್ಡೇಟ್ ಮಾಡಿದ್ದೇವೆ. ಹೆಚ್ಚಿನ ವಿವರಗಳಿಗಾಗಿ, ನಾವು ಈ ಕೆಳಗೆ ಪ್ರಮುಖ ಬದಲಾವಣೆಗಳ ಸಾರಾಂಶವನ್ನು ಸಹ ಒದಗಿಸಿದ್ದೇವೆ.
1.1 Google Chrome ವೆಬ್ ಸ್ಟೋರ್ (“ವೆಬ್ ಸ್ಟೋರ್”) ಬಳಸುವ ಮೂಲಕ, ನೀವು https://policies.google.com/terms ನಲ್ಲಿರುವ Google ಸೇವಾ ನಿಯಮಗಳು, https://policies.google.com/privacy ನಲ್ಲಿರುವ Google ಗೌಪ್ಯತೆ ನೀತಿ ಮತ್ತು ಈ ವೆಬ್ ಸ್ಟೋರ್ನ ಸೇವಾ ನಿಯಮಗಳಿಗೆ (ಒಟ್ಟಿಗೆ “ನಿಯಮಗಳು” ಎಂದು ಕರೆಯಲಾಗುತ್ತದೆ) ಬದ್ಧರಾಗಿರಲು ಸಮ್ಮತಿಸುತ್ತೀರಿ ಮತ್ತು ಒಪ್ಪುತ್ತೀರಿ.
1.2 Google Chrome ಗೆ ಸಂಬಂಧಿಸಿದ ಉತ್ಪನ್ನಗಳನ್ನು (Google Chrome ಗೆ ಸಂಬಂಧಿಸಿದ ಬಳಕೆಗಾಗಿ ರಚಿಸಲಾದ ಮತ್ತು ವೆಬ್ ಸ್ಟೋರ್ ಮೂಲಕ ವಿತರಿಸಲಾದ ಸಾಫ್ಟ್ವೇರ್, ಕಂಟೆಂಟ್ ಮತ್ತು ಡಿಜಿಟಲ್ ವಸ್ತುಗಳು ಎಂದು ವ್ಯಾಖ್ಯಾನಿಸಿರುವುದು) ಬ್ರೌಸ್ ಮಾಡಲು, ಪತ್ತೆಹಚ್ಚಲು ಮತ್ತು ಡೌನ್ಲೋಡ್ ಮಾಡಲು ನೀವು ವೆಬ್ ಸ್ಟೋರ್ ಅನ್ನು ಬಳಸಬಹುದು. ಈ ಕೆಲವು ಉತ್ಪನ್ನಗಳನ್ನು Google ಒದಗಿಸಿರಬಹುದು, ಆದರೆ ಇತರ ಉತ್ಪನ್ನಗಳನ್ನು Google ಜೊತೆಗೆ ಸಂಯೋಜಿತವಾಗಿರದ ಥರ್ಡ್ ಪಾರ್ಟಿಗಳು ಲಭ್ಯವಾಗುವಂತೆ ಮಾಡಿರಬಹುದು. Google ನಿಂದ ಹೊರತುಪಡಿಸಿ ಬೇರೆ ಮೂಲದಿಂದ ರಚಿಸಲಾಗಿರುವ ವೆಬ್ ಸ್ಟೋರ್ನಲ್ಲಿನ ಯಾವುದೇ ಉತ್ಪನ್ನಕ್ಕೆ Google ಜವಾಬ್ದಾರರಾಗಿರುವುದಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ.
1.3 ನೀವು (1) ನಿಮಗೆ ಪ್ರಸ್ತುತಪಡಿಸಲಾದ ಸಮ್ಮತಿಸಿ ಅಥವಾ ಸ್ವೀಕರಿಸಿ ಆಯ್ಕೆಗಳನ್ನು ಕ್ಲಿಕ್ ಮಾಡುವುದರ ಮೂಲಕ ಅಥವಾ (2) ವೆಬ್ ಸ್ಟೋರ್ ಆ್ಯಪ್ ಅಥವಾ ವೆಬ್ ಸರ್ವಿಸ್ ಅನ್ನು ವಾಸ್ತವಿಕವಾಗಿ ಬಳಸುವ ಮೂಲಕ ನಿಯಮಗಳನ್ನು ಸಮ್ಮತಿಸುತ್ತೀರಿ.
1.4 ವೆಬ್ ಸ್ಟೋರ್ ಅನ್ನು ಬಳಸಲು ನಿಮಗೆ ಕನಿಷ್ಠ 13 ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾಗಿರಬೇಕು. ನೀವು 13 ಮತ್ತು 18 ರ ನಡುವಿನ ವಯಸ್ಸಿನವರಾಗಿದ್ದರೆ, ವೆಬ್ ಸ್ಟೋರ್ ಅನ್ನು ಬಳಸಲು ನಿಮ್ಮ ಪೋಷಕರ ಅಥವಾ ಕಾನೂನಾತ್ಮಕ ಪೋಷಕರ ಅನುಮತಿಯನ್ನು ನೀವು ಹೊಂದಿರಬೇಕು.
2.1 Google ನ ಸ್ವಂತ ವಿವೇಚನೆಯ ಮೇರೆಗೆ, ಸಾಮಾನ್ಯವಾಗಿ ನಿಮಗೆ ಪೂರ್ವಸೂಚನೆ ನೀಡದೆಯೇ ನಿಮಗೆ ಅಥವಾ ಬಳಕೆದಾರರಿಗೆ ಒದಗಿಸುತ್ತಿರುವ ವೆಬ್ ಸ್ಟೋರ್ ಅನ್ನು (ಅಥವಾ ವೆಬ್ ಸ್ಟೋರ್ನಲ್ಲಿರುವ ಯಾವುದೇ ಫೀಚರ್ಗಳನ್ನು) Google ನಿಲ್ಲಿಸಬಹುದು (ಶಾಶ್ವತವಾಗಿ ಅಥವಾ ತಾತ್ಕಾಲಿಕವಾಗಿ) ಎಂದು ನೀವು ಸಮ್ಮತಿಸುತ್ತೀರಿ.
2.2 Google ನಿಮ್ಮ ಖಾತೆಗೆ ಪ್ರವೇಶವನ್ನು ನಿಷ್ಕ್ರಿಯಗೊಳಿಸಿದರೆ, ವೆಬ್ ಸ್ಟೋರ್, ನಿಮ್ಮ ಖಾತೆಯ ವಿವರಗಳು ಅಥವಾ ನಿಮ್ಮ ಖಾತೆಯಲ್ಲಿ ಸಂಗ್ರಹಿಸಲಾಗಿರುವ ಯಾವುದೇ ಫೈಲ್ಗಳು ಅಥವಾ ಇತರ ಉತ್ಪನ್ನಗಳನ್ನು ನೀವು ಆ್ಯಕ್ಸೆಸ್ ಮಾಡದಂತೆ ತಡೆಯಬಹುದು ಎಂಬುದನ್ನು ನೀವು ಒಪ್ಪುತ್ತೀರಿ.
2.3 ವೆಬ್ ಸ್ಟೋರ್ನ ಬಳಕೆ ಮತ್ತು ಕಾರ್ಯಾಚರಣೆಗೆ ಬೆಂಬಲವನ್ನು (ಉತ್ಪನ್ನಗಳನ್ನು ಹೇಗೆ ಹುಡುಕುವುದು, ಡೌನ್ಲೋಡ್ ಮಾಡುವುದು ಮತ್ತು ತೆಗೆದುಹಾಕುವುದು ಸೇರಿದಂತೆ) ವೆಬ್ ಸ್ಟೋರ್ ಆ್ಯಪ್ನ ಬಳಕೆದಾರ ಇಂಟರ್ಫೇಸ್ನಲ್ಲಿ Google ಒದಗಿಸುತ್ತದೆ. ವೆಬ್ ಸ್ಟೋರ್ನಲ್ಲಿ ಡೆವಲಪರ್ಗಳು ವಿತರಿಸಿದ ಉತ್ಪನ್ನಗಳಿಗೆ ಗ್ರಾಹಕ ಬೆಂಬಲವನ್ನು Google ಒದಗಿಸುವುದಿಲ್ಲ. ಪ್ರತಿಯೊಬ್ಬ ಡೆವಲಪರ್, ತಾವು ಒದಗಿಸುವ ಗ್ರಾಹಕ ಬೆಂಬಲದ ಮಟ್ಟವನ್ನು ನಿರ್ಧರಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಮತ್ತು ನೀವು ಅವರನ್ನು ನೇರವಾಗಿ ಸಂಪರ್ಕಿಸಬೇಕು.
3.1 ವೆಬ್ ಸ್ಟೋರ್ನಲ್ಲಿ ಕೆಲವು ಸೇವೆಗಳನ್ನು ಆ್ಯಕ್ಸೆಸ್ ಮಾಡಲು, ನಿಮ್ಮ ಹೆಸರು, ಇಮೇಲ್ ವಿಳಾಸ, Google ಖಾತೆಯ ಮಾಹಿತಿ, ವಿಳಾಸ ಮತ್ತು ಬಿಲ್ಲಿಂಗ್ ವಿವರಗಳಂತಹ ನಿಮ್ಮ ಕುರಿತಾದ ಮಾಹಿತಿಯನ್ನು ನೀವು ಒದಗಿಸಬೇಕಾಗಬಹುದು. ನೀವು Google ಗೆ ಒದಗಿಸುವಂತಹ ಯಾವುದೇ ಮಾಹಿತಿಯು ಯಾವಾಗಲೂ ನಿಖರವಾಗಿ, ಸರಿಯಾಗಿ ಮತ್ತು ಅಪ್ ಟು ಡೇಟ್ ಆಗಿರುತ್ತದೆ ಎಂದು ನೀವು ಒಪ್ಪುತ್ತೀರಿ.
3.2 ನೀವು (a) ನಿಯಮಗಳು ಮತ್ತು (b) ಅನ್ವಯವಾಗುವ ಯಾವುದೇ ಕಾನೂನು, ಕಾಯಿದೆ ಅಥವಾ ಸೂಕ್ತವಾದ ಅಧಿಕಾರ ಕ್ಷೇತ್ರಗಳಲ್ಲಿ ಸಾಮಾನ್ಯವಾಗಿ ಅಂಗೀಕರಿಸಲಾದ ಅಭ್ಯಾಸಗಳು ಅಥವಾ ಮಾರ್ಗಸೂಚಿಗಳು ಅನುಮತಿಸಿರುವ ಉದ್ದೇಶಗಳಿಗಾಗಿ ಮಾತ್ರ ವೆಬ್ ಸ್ಟೋರ್ ಅನ್ನು ಬಳಸಲು ಒಪ್ಪುತ್ತೀರಿ. ಯುನೈಟೆಡ್ ಸ್ಟೇಟ್ಸ್ನ ವಾಣಿಜ್ಯ ಇಲಾಖೆಯ ಆಫೀಸ್ ಆಫ್ ಫಾರೀನ್ ಅಸೆಟ್ಸ್ ಕಂಟ್ರೋಲ್ ಮೂಲಕ ನಿರ್ವಹಿಸಲಾಗುವ ಯುನೈಟೆಡ್ ಸ್ಟೇಟ್ಸ್ ವಾಣಿಜ್ಯ ಇಲಾಖೆಯ ರಫ್ತು ಆಡಳಿತ ನಿಯಮಗಳು ಮತ್ತು ನಿರ್ಬಂಧಗಳ ಕಾರ್ಯಕ್ರಮಗಳನ್ನು ಒಳಗೊಂಡಂತೆ ಆದರೆ ಇವುಗಳಿಗೆ ಮಾತ್ರ ಸೀಮಿತವಾಗಿರದ ಎಲ್ಲಾ ಅನ್ವಯವಾಗುವ ರಫ್ತು ನಿಯಂತ್ರಣಗಳನ್ನು ಅನುಸರಿಸಲು ನೀವು ಒಪ್ಪುತ್ತೀರಿ. ವೆಬ್ ಸ್ಟೋರ್ ಅನ್ನು ಬಳಸುವ ಮೂಲಕ, ಯುನೈಟೆಡ್ ಸ್ಟೇಟ್ಸ್ ಅಥವಾ ಇತರ ಅನ್ವಯವಾಗುವ ರಫ್ತು ಕಾನೂನುಗಳ ಅಡಿಯಲ್ಲಿ ರಫ್ತುಗಳು ಅಥವಾ ಸೇವೆಗಳನ್ನು ಸ್ವೀಕರಿಸುವುದರಿಂದ ನಿಮ್ಮನ್ನು ನಿಷೇಧಿಸಲಾಗಿಲ್ಲ ಎಂಬುದನ್ನು ನೀವು ಪ್ರತಿನಿಧಿಸುತ್ತೀರಿ ಮತ್ತು ಸಮರ್ಥಿಸುತ್ತೀರಿ. ಉತ್ಪನ್ನಗಳ ಡೌನ್ಲೋಡ್, ಇನ್ಸ್ಟಾಲೇಶನ್ ಮತ್ತು/ಅಥವಾ ಬಳಕೆಗೆ ಸಂಬಂಧಿಸಿದ ಎಲ್ಲಾ ಸ್ಥಳೀಯ ಕಾನೂನುಗಳು ಮತ್ತು ನಿಯಮಗಳನ್ನು ಅನುಸರಿಸಲು ನೀವು ಒಪ್ಪುತ್ತೀರಿ.
3.3 Google ನ ಜೊತೆಗಿನ ಪ್ರತ್ಯೇಕ ಒಪ್ಪಂದದ ಪ್ರಕಾರ ನಿಮಗೆ ನಿರ್ದಿಷ್ಟವಾಗಿ ಅನುಮತಿಸದ ಹೊರತು, Google ಒದಗಿಸುವ ಇಂಟರ್ಫೇಸ್ನ ಮೂಲಕ ಹೊರತುಪಡಿಸಿ ಬೇರೆ ಯಾವುದೇ ವಿಧಾನದಿಂದ ವೆಬ್ ಸ್ಟೋರ್ ಅನ್ನು ಆ್ಯಕ್ಸೆಸ್ ಮಾಡದಿರಲು (ಅಥವಾ ಆ್ಯಕ್ಸೆಸ್ ಮಾಡುವ ಪ್ರಯತ್ನ ಮಾಡದಿರಲು) ನೀವು ಒಪ್ಪುತ್ತೀರಿ. ಯಾವುದೇ ಸ್ವಯಂಚಾಲಿತ ವಿಧಾನಗಳ ಮೂಲಕ (ಸ್ಕ್ರಿಪ್ಟ್ಗಳು, ಕ್ರಾಲರ್ಗಳು ಅಥವಾ ಅದೇ ರೀತಿಯ ತಂತ್ರಜ್ಞಾನಗಳ ಬಳಸುವುದು ಸೇರಿದಂತೆ) ವೆಬ್ ಸ್ಟೋರ್ ಅನ್ನು ಆ್ಯಕ್ಸೆಸ್ ಮಾಡದಿರಲು (ಅಥವಾ ಆ್ಯಕ್ಸೆಸ್ ಮಾಡುವ ಪ್ರಯತ್ನ ಮಾಡದಿರಲು) ನೀವು ನಿರ್ದಿಷ್ಟವಾಗಿ ಒಪ್ಪುತ್ತೀರಿ ಮತ್ತು ವೆಬ್ ಸ್ಟೋರ್ ವೆಬ್ಸೈಟ್ನಲ್ಲಿರುವ ಯಾವುದೇ robots.txt ಫೈಲ್ನಲ್ಲಿ ಸೂಚಿಸಲಾದ ಸೂಚನೆಗಳನ್ನು ನೀವು ಅನುಸರಿಸುತ್ತೀರೆಂದು ಖಚಿತಪಡಿಸುತ್ತೀರಿ.
3.4 ವೆಬ್ ಸ್ಟೋರ್ಗೆ (ಅಥವಾ ವೆಬ್ ಸ್ಟೋರ್ಗೆ ಕನೆಕ್ಟ್ ಆಗಿರುವ ಸರ್ವರ್ಗಳು ಮತ್ತು ನೆಟ್ವರ್ಕ್ಗಳಿಗೆ) ಹಸ್ತಕ್ಷೇಪ ಮಾಡುವ ಅಥವಾ ಅಡ್ಡಿಪಡಿಸುವ ಯಾವುದೇ ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ ಎಂದು ನೀವು ಒಪ್ಪುತ್ತೀರಿ. Google ಅಥವಾ ಯಾವುದೇ ಥರ್ಡ್ ಪಾರ್ಟಿಯಿಂದ ನಿರ್ವಹಿಸಲಾಗುವ ಯಾವುದೇ ಸರ್ವರ್ಗಳು, ನೆಟ್ವರ್ಕ್ಗಳು ಅಥವಾ ವೆಬ್ಸೈಟ್ಗಳನ್ನು ಹಸ್ತಕ್ಷೇಪ ಮಾಡುವ ಅಥವಾ ಅಡ್ಡಿಪಡಿಸುವ ರೀತಿಯಲ್ಲಿ ವೆಬ್ ಸ್ಟೋರ್ನಲ್ಲಿ ಕಂಡುಬರುವ ಯಾವುದೇ ಉತ್ಪನ್ನಗಳನ್ನು ನೀವು ಬಳಸುವುದಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ.
3.5 Google ಜೊತೆಗಿನ ಪ್ರತ್ಯೇಕ ಒಪ್ಪಂದದಲ್ಲಿ ಹಾಗೆ ಮಾಡಲು ನಿಮಗೆ ನಿರ್ದಿಷ್ಟವಾಗಿ ಅನುಮತಿಸದ ಹೊರತು, ಯಾವುದೇ ಉದ್ದೇಶಕ್ಕಾಗಿ ವೆಬ್ ಸ್ಟೋರ್ ಅನ್ನು ಮರು ಉತ್ಪಾದಿಸುವುದಿಲ್ಲ, ತದ್ರೂಪ ಮಾಡುವುದಿಲ್ಲ, ನಕಲಿಸುವುದಿಲ್ಲ, ಮಾರಾಟ ಮಾಡುವುದಿಲ್ಲ, ಟ್ರೇಡ್ ಅಥವಾ ಮರುಮಾರಾಟ ಮಾಡುವುದಿಲ್ಲ ಎಂದು ನೀವು ಒಪ್ಪುತ್ತೀರಿ. ವೆಬ್ ಸ್ಟೋರ್ನಲ್ಲಿನ ಯಾವುದೇ ಉತ್ಪನ್ನದ ಡೆವಲಪರ್ ಜೊತೆಗಿನ ಪ್ರತ್ಯೇಕ ಒಪ್ಪಂದದಲ್ಲಿ ನಿಮಗೆ ನಿರ್ದಿಷ್ಟವಾಗಿ ಅನುಮತಿಸದ ಹೊರತು, ಯಾವುದೇ ಉದ್ದೇಶಕ್ಕಾಗಿ ವೆಬ್ ಸ್ಟೋರ್ನಲ್ಲಿನ ಯಾವುದೇ ಉತ್ಪನ್ನವನ್ನು ನೀವು ಮರು ಉತ್ಪಾದಿಸುವುದಿಲ್ಲ, ತದ್ರೂಪ ಮಾಡುವುದಿಲ್ಲ, ನಕಲಿಸುವುದಿಲ್ಲ, ಮಾರಾಟ ಮಾಡುವುದಿಲ್ಲ, ಟ್ರೇಡ್ ಅಥವಾ ಮರುಮಾರಾಟ ಮಾಡುವುದಿಲ್ಲ ಎಂದು ನೀವು ಒಪ್ಪುತ್ತೀರಿ.
3.6 ವೆಬ್ ಸ್ಟೋರ್ ಮತ್ತು ಯಾವುದೇ ಉತ್ಪನ್ನಗಳ ನಿಮ್ಮ ಬಳಕೆ, ನಿಯಮಗಳ ಅಡಿಯಲ್ಲಿ ನಿಮ್ಮ ಹೊಣೆಗಾರಿಕೆಗಳ ಯಾವುದೇ ಉಲ್ಲಂಘನೆ ಮತ್ತು ಅಂತಹ ಯಾವುದೇ ಉಲ್ಲಂಘನೆಯ ಪರಿಣಾಮಗಳಿಗೆ (Google ಅನುಭವಿಸಬಹುದಾದ ಯಾವುದೇ ರೀತಿಯ ನಷ್ಟ ಅಥವಾ ಹಾನಿ ಸೇರಿದಂತೆ) ನೀವು ಸಂಪೂರ್ಣ ಜವಾಬ್ದಾರರಾಗಿರುತ್ತೀರಿ (ಮತ್ತು Google ನಿಮಗೆ ಅಥವಾ ಯಾವುದೇ ಥರ್ಡ್ ಪಾರ್ಟಿಗೆ ಸಂಬಂಧಿಸಿದ ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ) ಎಂದು ನೀವು ಒಪ್ಪುತ್ತೀರಿ.
3.7 ಉತ್ಪನ್ನಗಳಲ್ಲಿ ಅನ್ವಯವಾಗುವ ಎಲ್ಲಾ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಒಳಗೊಂಡಂತೆ, ವೆಬ್ ಸ್ಟೋರ್ ಮತ್ತು ವೆಬ್ ಸ್ಟೋರ್ನ ಮೂಲಕ ಲಭ್ಯವಿರುವ ಉತ್ಪನ್ನಗಳಲ್ಲಿ Google ಮತ್ತು/ಅಥವಾ ಥರ್ಡ್ ಪಾರ್ಟಿಗಳು ಎಲ್ಲಾ ಹಕ್ಕು, ಶೀರ್ಷಿಕೆ ಮತ್ತು ಆಸಕ್ತಿಯನ್ನು ಹೊಂದಿದ್ದಾರೆ ಎಂದು ನೀವು ಒಪ್ಪುತ್ತೀರಿ. "ಬೌದ್ಧಿಕ ಆಸ್ತಿ ಹಕ್ಕುಗಳು" ಎಂದರೆ, ಸ್ವಾಮ್ಯದ ಕಾನೂನು, ಕೃತಿಸ್ವಾಮ್ಯ ಕಾನೂನು, ವ್ಯಾಪಾರದ ಗುಟ್ಟಿನ ಕಾನೂನು, ಟ್ರೇಡ್ಮಾರ್ಕ್ ಕಾನೂನು, ನ್ಯಾಯೋಚಿತವಲ್ಲದ ಸ್ಪರ್ಧಾ ಕಾನೂನು ಮತ್ತು ಜಗತ್ತಿನ ಯಾವುದೇ ಮತ್ತು ಎಲ್ಲಾ ಇತರ ಒಡೆತನದ ಹಕ್ಕುಗಳ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಹಾಗೂ ಎಲ್ಲಾ ಹಕ್ಕುಗಳು. ಈ ಮುಂದಿನ ಕೆಲಸಗಳನ್ನು ನೀವು ಮಾಡುವುದಿಲ್ಲ ಮತ್ತು ಈ ಕೆಲಸಗಳನ್ನು ಮಾಡಲು ಯಾವುದೇ ಥರ್ಡ್ ಪಾರ್ಟಿಗೆ ಅನುಮತಿಸುವುದಿಲ್ಲ ಎಂದು ನೀವು ಒಪ್ಪುತ್ತೀರಿ, (i) ಅನುಮತಿಸದ ಹೊರತು ಉತ್ಪನ್ನಗಳಿಗೆ ಸಂಬಂಧಿಸಿದ ಮೂಲ ಕೋಡ್ ಅನ್ನು ನಕಲಿಸುವುದು, ಮಾರಾಟ ಮಾಡುವುದು, ಪರವಾನಗಿ ನೀಡುವುದು, ವಿತರಿಸುವುದು, ವರ್ಗಾಯಿಸುವುದು, ಮಾರ್ಪಡಿಸುವುದು, ಹೊಂದಿಸುವುದು, ಅನುವಾದಿಸುವುದು, ವ್ಯುತ್ಪನ್ನ ಕೃತಿಗಳನ್ನು ಸಿದ್ಧಪಡಿಸುವುದು, ಡಿಕಂಪೈಲ್ ಮಾಡುವುದು, ರಿವರ್ಸ್ ಎಂಜಿನಿಯರಿಂಗ್, ಡಿಸ್ಅಸೆಂಬಲ್ ಮಾಡುವುದು ಅಥವಾ ಇಲ್ಲದಿದ್ದರೆ ಮೂಲ ಕೋಡ್ ಅನ್ನು ಪಡೆಯಲು ಪ್ರಯತ್ನಿಸುವುದು, (ii) ಉತ್ಪನ್ನಗಳಲ್ಲಿ ಯಾವುದೇ ಕಾರ್ಯಾಚರಣೆಯಿಂದ (ಡಿಜಿಟಲ್ ಹಕ್ಕುಗಳ ನಿರ್ವಹಣೆ ಅಥವಾ ಫಾರ್ವರ್ಡ್-ಲಾಕ್ ಕಾರ್ಯಾಚರಣೆ ಒಳಗೊಂಡಂತೆ) ಒದಗಿಸಿದ, ನಿಯೋಜಿಸಲಾದ ಅಥವಾ ಜಾರಿಗೊಳಿಸಿದ ಸುರಕ್ಷತೆ ಅಥವಾ ಕಂಟೆಂಟ್ ಬಳಕೆಯ ನಿಯಮಗಳನ್ನು ತಪ್ಪಿಸಲು ಅಥವಾ ವ್ಯರ್ಥಗೊಳಿಸಲು ಯಾವುದೇ ಕ್ರಮ ತೆಗೆದುಕೊಳ್ಳುವುದು, (iii) ಉತ್ಪನ್ನಗಳನ್ನು ಬಳಸಿ ಯಾವುದೇ ಕಾನೂನು ಅಥವಾ ಥರ್ಡ್ ಪಾರ್ಟಿ ಹಕ್ಕುಗಳನ್ನು ಉಲ್ಲಂಘಿಸುವ ಮೂಲಕ ಕಂಟೆಂಟ್ ಆ್ಯಕ್ಸೆಸ್ ಮಾಡುವುದು, ನಕಲಿಸುವುದು, ವರ್ಗಾಯಿಸುವುದು, ಟ್ರಾನ್ಸ್ಕೋಡ್ ಮಾಡುವುದು ಅಥವಾ ಮರುಪ್ರಸಾರ ಮಾಡುವುದು, ಅಥವಾ (iv) Google ಅಥವಾ ಯಾವುದೇ ಥರ್ಡ್ ಪಾರ್ಟಿಯ ಹಕ್ಕುಸ್ವಾಮ್ಯ ಸೂಚನೆಗಳು, ಟ್ರೇಡ್ಮಾರ್ಕ್ಗಳು ಅಥವಾ ಉತ್ಪನ್ನಗಳಲ್ಲಿ ಸೇರಿಕೊಂಡಿರುವ ಅಥವಾ ಒಳಗೊಂಡಿರುವ ಇತರ ಒಡೆತನದ ಹಕ್ಕುಗಳ ಸೂಚನೆಗಳನ್ನು ತೆಗೆದುಹಾಕುವುದು, ಅಸ್ಪಷ್ಟಗೊಳಿಸುವುದು ಅಥವಾ ಬದಲಾಯಿಸುವುದು.
3.8 ವೆಬ್ ಸ್ಟೋರ್ನಲ್ಲಿನ ಯಾವುದೇ ಅಥವಾ ಎಲ್ಲಾ ಉತ್ಪನ್ನಗಳನ್ನು ಪ್ರೀ-ಸ್ಕ್ರೀನ್ ಮಾಡುವ, ವಿಮರ್ಶಿಸುವ, ಫ್ಲ್ಯಾಗ್ ಮಾಡುವ, ಫಿಲ್ಟರ್ ಮಾಡುವ, ಮಾರ್ಪಡಿಸುವ, ನಿರಾಕರಿಸುವ ಅಥವಾ ತೆಗೆದುಹಾಕುವ ಹಕ್ಕನ್ನು Google ಕಾಯ್ದಿರಿಸಿಕೊಂಡಿದೆ (ಆದರೆ ಯಾವುದೇ ಹೊಣೆಗಾರಿಕೆಯನ್ನು ಹೊಂದಿಲ್ಲ). ವೆಬ್ ಸ್ಟೋರ್ ಅನ್ನು ಬಳಸಿದಾಗ, ನಿಮಗೆ ನಿಂದನೀಯ, ಅನುಚಿತ ಅಥವಾ ಆಕ್ಷೇಪಾರ್ಹವಾದ ಉತ್ಪನ್ನಗಳು ಕಾಣಿಸಿಕೊಳ್ಳಬಹುದಾದ ಸಾಧ್ಯತೆಯಿದೆ ಮತ್ತು ವೆಬ್ ಸ್ಟೋರ್ ಅನ್ನು ನಿಮ್ಮದೇ ಜವಾಬ್ದಾರಿಯಲ್ಲಿ ಬಳಸುತ್ತೀರಿ ಎಂಬುದನ್ನು ನೀವು ಒಪ್ಪುತ್ತೀರಿ.
3.9 ಹಿಂದಿರುಗಿಸುವಿಕೆಗಳು: ಅನ್ವಯವಾಗುವ ಯಾವುದೇ ಶುಲ್ಕದ ಪೂರ್ಣ ಮರುಪಾವತಿಗಾಗಿ ವೆಬ್ ಸ್ಟೋರ್ನಿಂದ ಖರೀದಿಸಿದ ಯಾವುದೇ ಉತ್ಪನ್ನಗಳನ್ನು ಹಿಂದಿರುಗಿಸಲು ನಿಮಗೆ ಖರೀದಿಸಿದ ಸಮಯದಿಂದ 30 ನಿಮಿಷಗಳು (ಡೌನ್ಲೋಡ್ ಹೊರತುಪಡಿಸಿ) ಇರುತ್ತವೆ. ಒದಗಿಸಲಾದ ಉತ್ಪನ್ನವನ್ನು ನೀವು ಒಂದು ಬಾರಿ ಮಾತ್ರ ಹಿಂತಿರುಗಿಸಬಹುದು; ನೀವು ನಂತರ ಅದೇ ಉತ್ಪನ್ನವನ್ನು ಇನ್ನೊಮ್ಮೆ ಖರೀದಿಸಿದರೆ, ನೀವು ಅದನ್ನು ಎರಡನೇ ಬಾರಿಗೆ ಹಿಂದಿರುಗಿಸಲು ಸಾಧ್ಯವಾಗುವುದಿಲ್ಲ. ಉತ್ಪನ್ನವನ್ನು ಹಿಂದಿರುಗಿಸುವ ಆಯ್ಕೆ ಲಭ್ಯವಿರುವ ಕಡೆ, ಅದು ವೆಬ್ ಸ್ಟೋರ್ ಬಳಕೆದಾರ ಇಂಟರ್ಫೇಸ್ ಮೂಲಕ ನಿಮಗೆ ಲಭ್ಯವಾಗುತ್ತದೆ.
3.10 ಚಾರ್ಜ್ಬ್ಯಾಕ್ ಮತ್ತು ಬಿಲ್ಲಿಂಗ್ ವಿವಾದಗಳು: ವೆಬ್ ಸ್ಟೋರ್ನಲ್ಲಿನ ಖರೀದಿಗಳಿಂದ ಉಂಟಾಗುವ ಬಿಲ್ಲಿಂಗ್ ವಿವಾದಗಳಿಗೆ Google ಜವಾಬ್ದಾರರಾಗಿರುವುದಿಲ್ಲ. ಎಲ್ಲಾ ಬಿಲ್ಲಿಂಗ್ ಸಮಸ್ಯೆಗಳನ್ನು ಪ್ರಶ್ನೆಯಲ್ಲಿರುವ ಡೆವಲಪರ್, ಪಾವತಿಯನ್ನು ಪ್ರಕ್ರಿಯೆಗೊಳಿಸುವವರು ಅಥವಾ ನಿಮ್ಮ ಕ್ರೆಡಿಟ್ ಕಾರ್ಡ್ ಕಂಪನಿಗೆ ನಿರ್ದೇಶಿಸಬೇಕು.
3.11 ರೇಟಿಂಗ್ಗಳು, ವಿಮರ್ಶೆಗಳು ಮತ್ತು ಬೆಂಬಲ ಸಂಬಂಧಿತ ಸಮಸ್ಯೆಗಳನ್ನು ಪೋಸ್ಟ್ ಮಾಡುವ ನೀತಿಗಳು: ರೇಟಿಂಗ್ಗಳು ಮತ್ತು ವಿಮರ್ಶೆಗಳು ಉಪಯುಕ್ತ ಮತ್ತು ವಿಶ್ವಾಸಾರ್ಹವಾಗಿರಲು ಉದ್ದೇಶಿಸಲಾಗಿದೆ. Chrome ವೆಬ್ ಸ್ಟೋರ್ನಲ್ಲಿ ಕಂಟೆಂಟ್ ಅನ್ನು ಪರಿಶೀಲಿಸುವುದರಿಂದ ಉಪಯುಕ್ತ ಫೀಡ್ಬ್ಯಾಕ್ ಅನ್ನು ಹಂಚಿಕೊಳ್ಳಲು ಮತ್ತು ಇತರ Chrome ವೆಬ್ ಸ್ಟೋರ್ ಬಳಕೆದಾರರಿಗೆ ಉತ್ತಮ ಕಂಟೆಂಟ್ ಮತ್ತು ಸೇವೆಗಳನ್ನು ಹುಡುಕುವುದಕ್ಕೆ ಸಹಾಯ ಮಾಡಲು ಉತ್ತಮ ಮಾರ್ಗವಾಗಿದೆ.
ರೇಟಿಂಗ್ಗಳು ಮತ್ತು ವಿಮರ್ಶೆಗಳಿಗೆ ಸಂಬಂಧಿಸಿದ Chrome ವೆಬ್ ಸ್ಟೋರ್ ನೀತಿಗಳು ಕೆಳಗಿವೆ. ಆಕ್ಷೇಪಾರ್ಹವಾದ ಅಥವಾ ಈ ನೀತಿಗಳನ್ನು ಉಲ್ಲಂಘಿಸುವ ವಿಮರ್ಶೆಗಳು ಮತ್ತು ಕಾಮೆಂಟ್ಗಳನ್ನು ಸ್ವಯಂಚಾಲಿತ ಮತ್ತು ಮಾನವ ರಿವ್ಯೂ ಸಂಯೋಜನೆಯ ಮೂಲಕ ತೆಗೆದುಹಾಕಲಾಗುತ್ತದೆ ಮತ್ತು ಅವುಗಳನ್ನು ಪುನರಾವರ್ತಿತವಾಗಿ ಅಥವಾ ತೀವ್ರವಾಗಿ ಉಲ್ಲಂಘಿಸುವ ಯಾರಾದರೂ Chrome ವೆಬ್ ಸ್ಟೋರ್ನಲ್ಲಿ ಪೋಸ್ಟ್ ಮಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು. ಸಮಸ್ಯೆಯನ್ನು ಸರಿಪಡಿಸಲು ನೀವು ಪರಿಷ್ಕರಣೆಯನ್ನು ಸಲ್ಲಿಸದ ಹೊರತು ತೆಗೆದುಹಾಕುವಿಕೆಗಳು ಅನಿರ್ದಿಷ್ಟವಾಗಿರುತ್ತವೆ. ಜಾರಿಗೊಳಿಸುವಿಕೆ ಕ್ರಮಗಳನ್ನು ಡೀಫಾಲ್ಟ್ ಆಗಿ ಜಾಗತಿಕವಾಗಿ ಅನ್ವಯಿಸಲಾಗುತ್ತದೆ. ನಿಮ್ಮ ಜಾರಿಗೊಳಿಸುವಿಕೆ ಕ್ರಮವು ಪ್ರಾದೇಶಿಕ ನಿರ್ಬಂಧಕ್ಕೆ ಒಳಪಟ್ಟಿದ್ದರೆ, ಆ ಸಂಗತಿಯ ಕುರಿತು ನಿಮಗೆ ತಿಳಿಸಲಾಗುತ್ತದೆ.
3.11a ಸ್ಪ್ಯಾಮ್ ಮತ್ತು ನಕಲಿ ವಿಮರ್ಶೆಗಳು: ನಿಮ್ಮ ವಿಮರ್ಶೆಗಳು ನೀವು ವಿಮರ್ಶಿಸುತ್ತಿರುವ ಕಂಟೆಂಟ್ ಅಥವಾ ಸೇವೆಯೊಂದಿಗೆ ನೀವು ಹೊಂದಿರುವ ಅನುಭವವನ್ನು ಪ್ರತಿಬಿಂಬಿಸಬೇಕು.
3.11b ವಿಷಯಕ್ಕೆ ಸಂಬಂಧವಿರದ ವಿಮರ್ಶೆಗಳು: ವಿಮರ್ಶೆಗಳು ವಿಷಯಕ್ಕೆ ಸಂಬಂಧಿಸಿರಲಿ ಮತ್ತು ನೀವು ವಿಮರ್ಶಿಸುತ್ತಿರುವ ಕಂಟೆಂಟ್, ಸೇವೆ ಅಥವಾ ಅನುಭವಕ್ಕೆ ಸೂಕ್ತವಾಗಿರಲಿ.
3.11c ಜಾಹೀರಾತು: ವಿಮರ್ಶೆಗಳು ಉಪಯುಕ್ತವಾಗಿರಬೇಕೆಂದು ನಾವು ಬಯಸುತ್ತೇವೆ ಮತ್ತು ನೀವು ವಿಮರ್ಶಿಸುತ್ತಿರುವ ಕಂಟೆಂಟ್ ಅಥವಾ ಸೇವೆಯನ್ನು ಹೊರತುಪಡಿಸಿ ಬೇರೆ ಏನನ್ನಾದರೂ ಅವುಗಳು ಪ್ರಚಾರ ಮಾಡುತ್ತಿದ್ದರೆ ಅವುಗಳು ಉಪಯುಕ್ತವಾಗಿರುವುದಿಲ್ಲ.
3.11d ಹಿತಾಸಕ್ತಿ ಸಂಘರ್ಷ: ವಿಮರ್ಶೆಗಳು ನಿಜವಾಗಿದ್ದರೆ ಮತ್ತು ಪಕ್ಷಪಾತ ಮಾಡದಿದ್ದರೆ ಮಾತ್ರ ಅವುಗಳು ಹೆಚ್ಚು ಮೌಲ್ಯಯುತವಾಗಿರುತ್ತವೆ. ಹಣಕಾಸಿನ ಲಾಭದಿಂದ ಪ್ರೇರೇಪಿತರಾಗದ ಜನರು ಅವುಗಳನ್ನು ಬರೆಯಬೇಕು.
3.11e ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್: ವಿಮರ್ಶೆಗಳು ನಿಮ್ಮ ಸ್ವಂತದ್ದಾಗಿರಬೇಕು ಮತ್ತು ನಿಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಪ್ರತಿಬಿಂಬಿಸಬೇಕು.
3.11f ವೈಯಕ್ತಿಕ ಮತ್ತು ಗೌಪ್ಯ ಮಾಹಿತಿ: ವಿಮರ್ಶೆಗಳು ಅನುಭವಗಳನ್ನು ಹಂಚಿಕೊಳ್ಳಲು ಉದ್ದೇಶಿತಗೊಂಡಿವೆ ಮತ್ತು ಸೂಕ್ಷ್ಮವಾದ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸದೆಯೇ ನೀವು ಯಾವುದಾದರೂ ವಿಷಯದ ಕುರಿತು ಹೇಗೆ ಭಾವಿಸುತ್ತೀರಿ ಎಂಬುದನ್ನು ವ್ಯಕ್ತಪಡಿಸಬಹುದು.
3.11g ಕಾನೂನು ಬಾಹಿರ ಕಂಟೆಂಟ್: ನಿಮ್ಮ ವಿಮರ್ಶೆಗಳು ಕಾನೂನು ಮತ್ತು ನೀವು ಒಪ್ಪಿಕೊಂಡಿರುವ ಯಾವುದೇ ನಿಯಮಗಳು ಅಥವಾ ಕಾನೂನು ಒಪ್ಪಂದಗಳನ್ನು ಅನುಸರಿಸಬೇಕು.
3.11h ಲೈಂಗಿಕವಾಗಿ ಅಶ್ಲೀಲವಾದ ಕಂಟೆಂಟ್: Chrome ವೆಬ್ ಸ್ಟೋರ್ ವಿಶಾಲ ಪ್ರೇಕ್ಷಕರಿಗಾಗಿ ಉದ್ದೇಶಿಸಲಾಗಿದೆ ಮತ್ತು ವಿಮರ್ಶೆಗಳು ಅದನ್ನು ಪ್ರತಿಬಿಂಬಿಸಬೇಕು.
3.11i ದ್ವೇಷಪೂರಿತ ಮಾತು: Chrome ವೆಬ್ ಸ್ಟೋರ್ ಎಲ್ಲಾ ಜನರಿಗಾಗಿ ಉದ್ದೇಶಿಸಲಾಗಿದೆ ಮತ್ತು ವಿಮರ್ಶೆಗಳು ಅದನ್ನು ಪ್ರತಿಬಿಂಬಿಸಬೇಕು.
3.11j ಆಕ್ಷೇಪಾರ್ಹ ವಿಮರ್ಶೆಗಳು: Chrome ವೆಬ್ ಸ್ಟೋರ್ ಮನರಂಜನೆ ಮತ್ತು ಮಾಹಿತಿಯನ್ನು ನೀಡಲು ಉದ್ದೇಶಿತವಾಗಿದೆಯೇ ಹೊರತು, ದಾಳಿ ಮಾಡಲು ಮತ್ತು ಅಪರಾಧ ಮಾಡಲು ಅಲ್ಲ.
4.1 ಕೆಲವು ಉತ್ಪನ್ನಗಳು (Google ಅಥವಾ ಥರ್ಡ್ ಪಾರ್ಟಿಗಳು ಅಭಿವೃದ್ಧಿಪಡಿಸಿದರೂ) ಇತರ Google ಉತ್ಪನ್ನಗಳು ಮತ್ತು ಸೇವೆಗಳ ಜೊತೆಗೆ ಬಳಸಲಾಗುವ ಫೀಚರ್ಗಳನ್ನು ಒಳಗೊಂಡಿರಬಹುದು. ಅದರಂತೆಯೇ, ಆ ಉತ್ಪನ್ನಗಳು ಮತ್ತು ಸೇವೆಗಳಲ್ಲಿರುವ ಅಂತಹ ಫೀಚರ್ಗಳ ನಿಮ್ಮ ಬಳಕೆಯನ್ನು https://policies.google.com/terms ನಲ್ಲಿರುವ Google ನ ಸೇವಾ ನಿಯಮಗಳು, https://policies.google.com/privacy ನಲ್ಲಿರುವ Google ನ ಗೌಪ್ಯತೆ ನೀತಿ ಮತ್ತು ಅನ್ವಯವಾಗುವ ಯಾವುದೇ Google ಸೇವಾ-ನಿರ್ದಿಷ್ಟ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯಿಂದ ನಿಯಂತ್ರಿಸಲಾಗುತ್ತದೆ.
4.2 Google ಅಭಿವೃದ್ಧಿಪಡಿಸಿದ ಉತ್ಪನ್ನಗಳ ನಿಮ್ಮ ಬಳಕೆಯನ್ನು ಈ ವೆಬ್ ಸ್ಟೋರ್ ಸೇವಾ ನಿಯಮಗಳ ವಿಭಾಗ 8 ರ (Google ಅಭಿವೃದ್ಧಿಪಡಿಸಿದ ಉತ್ಪನ್ನಗಳಿಗೆ ಸಂಬಂಧಿಸಿದ ಹೆಚ್ಚುವರಿ ಅಂತಿಮ ಬಳಕೆದಾರ ನಿಯಮಗಳು) ಮೂಲಕ ನಿಯಂತ್ರಿಸಲಾಗುತ್ತದೆ.
ಕಾನೂನಿನ ಮೂಲಕ ಅನುಮತಿಸಲಾಗಿರುವ ಗರಿಷ್ಠ ವ್ಯಾಪ್ತಿಗೆ ಸಂಬಂಧಿಸಿದಂತೆ, ನಿಮ್ಮ ಡೌನ್ಲೋಡಿಂಗ್, ಇನ್ಸ್ಟಾಲೇಶನ್ ಸೇರಿದಂತೆ, ವೆಬ್ ಸ್ಟೋರ್ನ ನಿಮ್ಮ ಬಳಕೆಯಿಂದ ಅಥವಾ ಯಾವುದೇ ಉತ್ಪನ್ನಗಳ ಬಳಕೆಯಿಂದ ಅಥವಾ ಈ ನಿಯಮಗಳ ನಿಮ್ಮ ಉಲ್ಲಂಘನೆಯಿಂದ ಉಂಟಾಗುವ ಅಥವಾ ಸಂಭವಿಸುವ ಯಾವುದೇ ಮತ್ತು ಎಲ್ಲಾ ನಷ್ಟಗಳು, ಹೊಣೆಗಾರಿಕೆಗಳು, ಹಾನಿಗಳು, ಶುಲ್ಕಗಳು ಹಾಗೂ ವೆಚ್ಚಗಳು ಸೇರಿದಂತೆ, ನೀವು Google, ಅದರ ಅಂಗಸಂಸ್ಥೆಗಳು ಮತ್ತು ಅವುಗಳ ನಿರ್ದೇಶಕರು, ಅಧಿಕಾರಿಗಳು, ಉದ್ಯೋಗಿಗಳು ಮತ್ತು ಏಜೆಂಟ್ಗಳನ್ನು ಯಾವುದೇ ಹಾಗೂ ಎಲ್ಲಾ ಕ್ಲೇಮ್ಗಳು, ಕ್ರಮಗಳು, ದಾವೆಗಳು ಅಥವಾ ವಿಚಾರಣೆಗಳಿಂದ ರಕ್ಷಿಸಲು, ಕಾಪಾಡಲು ಮತ್ತು ಹಾನಿಯಿಂದ ದೂರವಿರಿಸಲು ನೀವು ಒಪ್ಪುತ್ತೀರಿ.
ವೆಬ್ ಸ್ಟೋರ್ ಅಥವಾ ಯಾವುದೇ ಉತ್ಪನ್ನಗಳನ್ನು ನ್ಯೂಕ್ಲಿಯರ್ ಸೌಲಭ್ಯಗಳ, ಲೈಫ್ ಸಪೋರ್ಟ್ ಸಿಸ್ಟಂಗಳ, ಎಮರ್ಜೆನ್ಸಿ ಕಮ್ಯುನಿಕೇಷನ್ಗಳ, ಏರ್ಕ್ರಾಫ್ಟ್ ನ್ಯಾವಿಗೇಷನ್ ಅಥವಾ ಕಮ್ಯುನಿಕೇಷನ್ ಸಿಸ್ಟಂಗಳ, ಏರ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಂಗಳ ಅಥವಾ ಉತ್ಪನ್ನಗಳ ವಿಫಲತೆಯು ಸಾವು, ವೈಯಕ್ತಿಕ ಗಾಯ ಅಥವಾ ತೀವ್ರ ದೈಹಿಕ ಅಥವಾ ಪರಿಸರ ಹಾನಿಗೆ ಕಾರಣವಾಗಬಹುದಾದಂತಹ ಯಾವುದೇ ಇತರ ಚಟುವಟಿಕೆಗಳ ಕಾರ್ಯಾಚರಣೆಯಲ್ಲಿ ಬಳಸಲು ಉದ್ದೇಶಿಸಲಾಗಿರುವುದಿಲ್ಲ.
7.1 ಈ ನಿಯಮಗಳು ನಿಮ್ಮ ಮತ್ತು Google ನಡುವಿನ ಸಂಪೂರ್ಣ ಕಾನೂನು ಒಪ್ಪಂದವನ್ನು ರಚಿಸುತ್ತವೆ ಮತ್ತು ವೆಬ್ ಸ್ಟೋರ್ ಮತ್ತು ಉತ್ಪನ್ನಗಳ ನಿಮ್ಮ ಬಳಕೆಯನ್ನು ನಿಯಂತ್ರಿಸುತ್ತವೆ ಮತ್ತು ವೆಬ್ ಸ್ಟೋರ್ ಮತ್ತು ಉತ್ಪನ್ನಗಳಿಗೆ ಸಂಬಂಧಿಸಿದಂತೆ ನಿಮ್ಮ ಮತ್ತು Google ನಡುವಿನ ಯಾವುದೇ ಪೂರ್ವ ಒಪ್ಪಂದಗಳನ್ನು ಸಂಪೂರ್ಣವಾಗಿ ಬದಲಾಯಿಸುತ್ತವೆ.
7.2 Google ಪೋಷಕ ಕಂಪನಿಗಳ ಸಮೂಹದಲ್ಲಿರುವ ಪ್ರತಿ ಸದಸ್ಯರು ಈ ನಿಯಮಗಳಿಗೆ ಥರ್ಡ್ ಪಾರ್ಟಿಯ ಫಲಾನುಭವಿಗಳಾಗಿರುವಿರಿ ಮತ್ತು ಅಂತಹ ಇತರೆ ಕಂಪನಿಗಳು ಅದಕ್ಕೆ ಪ್ರಯೋಜನಕಾರಿಯಾಗಿರುವ ಈ ನಿಯಮಗಳಲ್ಲಿ ಯಾವುದೇ ನಿಯಮವನ್ನಾದರೂ (ಅಥವಾ ಅನುಕೂಲಕರವಾಗಿರುವ ಹಕ್ಕುಗಳು) ನೇರವಾಗಿ ಜಾರಿಗೆ ತರುವ ಅಧಿಕಾರವನ್ನು ಹೊಂದಿರುತ್ತದೆಂದು ಹಾಗೂ ಅವುಗಳ ಮೇಲೆ ಅವಲಂಬಿತವಾಗಿರುತ್ತವೆ ಎಂದು ನೀವು ಅರ್ಥಮಾಡಿಕೊಂಡಿದ್ದೀರಿ ಮತ್ತು ಒಪ್ಪಿಕೊಳ್ಳುತ್ತೀರಿ. ಇದನ್ನು ಹೊರತುಪಡಿಸಿ, ಬೇರೆ ಯಾವುದೇ ವ್ಯಕ್ತಿ ಅಥವಾ ಕಂಪನಿಯು ಈ ನಿಯಮಗಳಿಗೆ ಥರ್ಡ್ ಪಾರ್ಟಿಯ ಫಲಾನುಭವಿಗಳಾಗಿರಬಾರದು.
7.3 ಯಾವುದೇ ಅಧಿಕಾರ ಕ್ಷೇತ್ರದಲ್ಲಿ ನಿಷೇಧಾಜ್ಞೆ ಪರಿಹಾರೋಪಾಯಗಳಿಗಾಗಿ (ಅಥವಾ ಸಮಾನ ರೀತಿಯ ತುರ್ತು ಕಾನೂನು ಪರಿಹಾರ) ಅರ್ಜಿ ಸಲ್ಲಿಸಲು Google ಗೆ ಅನುಮತಿಸಲಾಗುವುದು ಎಂದು ನೀವು ಒಪ್ಪುತ್ತೀರಿ.
8.1 ಯಾವುದೇ ಉತ್ಪನ್ನ ಅಥವಾ ಅದರ ಭಾಗಗಳನ್ನು (“ಉತ್ಪನ್ನ) ಡೌನ್ಲೋಡ್ ಮಾಡುವ ಮೂಲಕ, ಇನ್ಸ್ಟಾಲ್ ಮಾಡುವ ಮೂಲಕ ಅಥವಾ ಬಳಸುವ ಮೂಲಕ, ನೀವು https://policies.google.com/terms ನಲ್ಲಿರುವ Google ಸೇವಾ ನಿಯಮಗಳು ಮತ್ತು https://policies.google.com/privacy ನಲ್ಲಿರುವ Google ಗೌಪ್ಯತೆ ನೀತಿಗೆ ಬದ್ಧರಾಗಿರಲು ಸಮ್ಮತಿಸುತ್ತೀರಿ ಮತ್ತು ಒಪ್ಪುತ್ತೀರಿ.
ಅದೇ ರೀತಿ, ಯಾವುದೇ ಉತ್ಪನ್ನವನ್ನು ಡೌನ್ಲೋಡ್ ಮಾಡುವ ಮೂಲಕ, ಇನ್ಸ್ಟಾಲ್ ಮಾಡುವ ಮೂಲಕ ಅಥವಾ ಬಳಸುವ ಮೂಲಕ, ನೀವು ಈ ಕೆಳಗಿನ ಹೆಚ್ಚುವರಿ ನಿಯಮಗಳು ಮತ್ತು ನಿಬಂಧನೆಗಳನ್ನು (“ನಿಯಮಗಳು ಮತ್ತು ನಿಬಂಧನೆಗಳು”) ಸ್ವೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ.
8.2 ಉತ್ಪನ್ನದ ಅಂತಹ ಫೀಚರ್ಗಳ ನಿಮ್ಮ ಬಳಕೆಯನ್ನು https://www.google.com/chrome/terms/ ನಲ್ಲಿರುವ Google Chrome ಮತ್ತು Chrome OS ಹೆಚ್ಚುವರಿ ಸೇವಾ ನಿಯಮಗಳು ಮತ್ತು https://www.google.com/chrome/privacy/ ನಲ್ಲಿರುವ Chrome ಗೌಪ್ಯತೆ ಸೂಚನೆ ಮತ್ತು ಅನ್ವಯವಾಗುವ ಯಾವುದೇ Google ಸೇವಾ ನಿರ್ದಿಷ್ಟ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯಿಂದ ನಿಯಂತ್ರಿಸಲಾಗುತ್ತದೆ, ಅವುಗಳನ್ನು ಕಾಲಕಾಲಕ್ಕೆ ಮತ್ತು ಯಾವುದೇ ಸೂಚನೆ ನೀಡದೆಯೇ ಅಪ್ಡೇಟ್ ಮಾಡಲಾಗುತ್ತದೆ. ಮುಂದುವರಿದ ನಿಮ್ಮ ಉತ್ಪನ್ನದ ಬಳಕೆಯು, ಈ ನಿಯಮಗಳು ಮತ್ತು ನಿಬಂಧನೆಗಳಿಗೆ ಮತ್ತು ಈ ಪ್ಯಾರಾಗ್ರಾಫ್ನಲ್ಲಿ ಪಟ್ಟಿ ಮಾಡಲಾದ ಇತರ ನಿಯಮಗಳಿಗೆ ಸಂಬಂಧಿಸಿದ ನಿಮ್ಮ ಒಪ್ಪಂದವನ್ನು ರಚಿಸುತ್ತದೆ. ನೀವು ಒಪ್ಪದಿದ್ದರೆ, ಉತ್ಪನ್ನದ ಬಳಕೆಯನ್ನು ನಿಲ್ಲಿಸಿ.
8.3 ಈ ಉತ್ಪನ್ನ, ಸಂಬಂಧಿಸಿದ ವಿಷಯಗಳು ಮತ್ತು ಡಾಕ್ಯುಮೆಂಟೇಶನ್ ಅನ್ನು ಸಂಪೂರ್ಣವಾಗಿ ಖಾಸಗಿ ಫಂಡ್ಗಳಿಂದ ಅಭಿವೃದ್ಧಿಪಡಿಸಲಾಗಿದೆ. ಉತ್ಪನ್ನದ ಬಳಕೆದಾರರು ಯುನೈಟೆಡ್ ಸ್ಟೇಟ್ಸ್ ಸರ್ಕಾರದ ಏಜೆನ್ಸಿ, ಇಲಾಖೆ, ಉದ್ಯೋಗಿ ಅಥವಾ ಇತರ ಘಟಕವಾಗಿದ್ದರೆ, ತಾಂತ್ರಿಕ ಡೇಟಾ ಅಥವಾ ಕೈಪಿಡಿಗಳು ಸೇರಿದಂತೆ, ಉತ್ಪನ್ನದ ಬಳಕೆ, ತದ್ರೂಪಗೊಳಿಸುವಿಕೆ, ಪುನರುತ್ಪಾದನೆ, ಬಿಡುಗಡೆಗೊಳಿಸುವಿಕೆ, ಮಾರ್ಪಡಿಸುವಿಕೆ, ಬಹಿರಂಗಪಡಿಸುವಿಕೆ ಅಥವಾ ವರ್ಗಾವಣೆಯನ್ನು ಈ ನಿಯಮಗಳು ಮತ್ತು ನಿಬಂಧನೆಗಳಲ್ಲಿ ಒಳಗೊಂಡಿರುವ ನಿಯಮಗಳು, ನಿಬಂಧನೆಗಳು ಹಾಗೂ ಒಡಂಬಡಿಕೆಗಳ ಮೂಲಕ ನಿರ್ಬಂಧಿಸಲಾಗಿದೆ. ನಾಗರಿಕ ಏಜೆನ್ಸಿಗಳಿಗೆ ಸಂಬಂಧಿಸಿದ ಫೆಡರಲ್ ಸ್ವಾಧೀನ ನಿಯಂತ್ರಣ 12.212 ಮತ್ತು ಮಿಲಿಟರಿ ಏಜೆನ್ಸಿಗಳಿಗೆ ಸಂಬಂಧಿಸಿದ ರಕ್ಷಣಾ ಫೆಡರಲ್ ಸ್ವಾಧೀನ ನಿಯಂತ್ರಣ ಅನುಬಂಧ 227.7202 ಗೆ ಅನುಗುಣವಾಗಿ, ಉತ್ಪನ್ನದ ಬಳಕೆಯನ್ನು ಈ ನಿಯಮಗಳು ಮತ್ತು ನಿಬಂಧನೆಗಳ ಮೂಲಕ ಮತ್ತಷ್ಟು ನಿರ್ಬಂಧಿಸಲಾಗಿದೆ.
8.4 ಕಾಲಕಾಲಕ್ಕೆ, ಉತ್ಪನ್ನವು Google ಡೆವಲಪರ್ ನಿಯಮಗಳು ಅಥವಾ ಇತರ ಕಾನೂನು ಒಪ್ಪಂದಗಳು, ಕಾನೂನುಗಳು, ನಿಯಮಗಳು ಅಥವಾ ನೀತಿಗಳನ್ನು ಉಲ್ಲಂಘಿಸುತ್ತದೆ ಎಂದು Google ನಿರ್ಧರಿಸಬಹುದು. ಅಂತಹ ಸಂದರ್ಭದಲ್ಲಿ, Google ತನ್ನ ಸ್ವಂತ ವಿವೇಚನೆಯ ಮೇರೆಗೆ ನಿಮ್ಮ ಸಿಸ್ಟಂನಿಂದ ಆ ಉತ್ಪನ್ನಗಳನ್ನು ದೂರದಿಂದಲೇ ನಿಷ್ಕ್ರಿಯಗೊಳಿಸುವ ಅಥವಾ ತೆಗೆದುಹಾಕುವ ಹಕ್ಕನ್ನು ಉಳಿಸಿಕೊಂಡಿದೆ ಎಂದು ನೀವು ಒಪ್ಪುತ್ತೀರಿ. ಕಾಲಕಾಲಕ್ಕೆ, ದೋಷ ಪರಿಹಾರಗಳು ಅಥವಾ ವರ್ಧಿತ ಕಾರ್ಯಾಚರಣೆಯನ್ನು ಒಳಗೊಂಡಂತೆ ಆದರೆ ಕೇವಲ ಇವುಗಳಿಗೆ ಸೀಮಿತವಾಗಿರದ ಉತ್ಪನ್ನಗಳಿಗೆ ಲಭ್ಯವಿರುವ ಅಪ್ಡೇಟ್ಗಳಿಗಾಗಿ Google Chrome ರಿಮೋಟ್ ಸರ್ವರ್ಗಳೊಂದಿಗೆ ಪರಿಶೀಲಿಸಬಹುದು. ನಿಮ್ಮ ಬ್ರೌಸರ್ ಈ ಕಾರ್ಯಾಚರಣೆಯನ್ನು ಹೊಂದಿದ್ದರೆ, ಅಂತಹ ಅಪ್ಡೇಟ್ಗಳನ್ನು ಕೆಲವು ಸಂದರ್ಭಗಳಲ್ಲಿ ನಿಮಗೆ ಹೆಚ್ಚಿನ ಸೂಚನೆ ನೀಡದೆ ಸ್ವಯಂಚಾಲಿತವಾಗಿ ವಿನಂತಿಸಲಾಗುತ್ತದೆ, ಡೌನ್ಲೋಡ್ ಮಾಡಲಾಗುತ್ತದೆ ಮತ್ತು ಇನ್ಸ್ಟಾಲ್ ಮಾಡಲಾಗುತ್ತದೆ ಎಂದು ನೀವು ಒಪ್ಪುತ್ತೀರಿ.
8.5 ಈ ನಿಯಮಗಳು ಮತ್ತು ನಿಬಂಧನೆಗಳನ್ನು ಈ ಕೆಳಗೆ ಸೂಚಿಸಿರುವಂತೆ ನೀವು ಅಥವಾ Google ಕೊನೆಗೊಳ್ಳುವವರೆಗೆ ಅವುಗಳು ಅನ್ವಯವಾಗುತ್ತಲೇ ಇರುತ್ತವೆ. ನಿಮ್ಮ ಸಿಸ್ಟಂ ಅಥವಾ ಸಾಧನದಿಂದ ಉತ್ಪನ್ನವನ್ನು ಸಂಪೂರ್ಣವಾಗಿ ಶಾಶ್ವತವಾಗಿ ಅಳಿಸುವ ಮೂಲಕ ನೀವು ಯಾವಾಗ ಬೇಕಾದರೂ ಈ ನಿಯಮಗಳು ಮತ್ತು ನಿಬಂಧನೆಗಳನ್ನು ಕೊನೆಗೊಳಿಸಬಹುದು. ಈ ನಿಯಮಗಳು ಮತ್ತು ನಿಬಂಧನೆಗಳ ಯಾವುದೇ ಪೂರೈಕೆಯನ್ನು ಅನುಸರಿಸಲು ನೀವು ವಿಫಲವಾದರೆ, Google ಅಥವಾ ಯಾವುದೇ ಥರ್ಡ್ ಪಾರ್ಟಿಯ ಸೂಚನೆ ಇಲ್ಲದೆಯೇ ನಿಮ್ಮ ಹಕ್ಕುಗಳು ಸ್ವಯಂಚಾಲಿತವಾಗಿ ಮತ್ತು ತಕ್ಷಣವೇ ಕೊನೆಗೊಳ್ಳುತ್ತವೆ. ಅಂತಹ ಸಂದರ್ಭದಲ್ಲಿ, ನೀವು ತಕ್ಷಣವೇ ಉತ್ಪನ್ನವನ್ನು ಅಳಿಸಬೇಕಾಗುತ್ತದೆ.
8.6 ಕಾನೂನಿನ ಮೂಲಕ ಅನುಮತಿಸಲಾಗಿರುವ ಗರಿಷ್ಠ ವ್ಯಾಪ್ತಿಗೆ ಸಂಬಂಧಿಸಿದಂತೆ, ನಿಮ್ಮ ಡೌನ್ಲೋಡಿಂಗ್, ಇನ್ಸ್ಟಾಲೇಶನ್ ಸೇರಿದಂತೆ, ಉತ್ಪನ್ನದ ನಿಮ್ಮ ಬಳಕೆಯಿಂದ ಅಥವಾ ಈ ನಿಯಮಗಳು ಮತ್ತು ನಿಬಂಧನೆಗಳ ನಿಮ್ಮ ಉಲ್ಲಂಘನೆಯಿಂದ ಉಂಟಾಗುವ ಅಥವಾ ಸಂಭವಿಸುವ ಯಾವುದೇ ಮತ್ತು ಎಲ್ಲಾ ನಷ್ಟಗಳು, ಹೊಣೆಗಾರಿಕೆಗಳು, ಹಾನಿಗಳು, ಶುಲ್ಕಗಳು ಹಾಗೂ ವೆಚ್ಚಗಳು ಸೇರಿದಂತೆ, ನೀವು Google, ಅದರ ಅಂಗಸಂಸ್ಥೆಗಳು ಮತ್ತು ಅವುಗಳ ನಿರ್ದೇಶಕರು, ಅಧಿಕಾರಿಗಳು, ಉದ್ಯೋಗಿಗಳು ಮತ್ತು ಏಜೆಂಟ್ಗಳನ್ನು ಯಾವುದೇ ಹಾಗೂ ಎಲ್ಲಾ ಕ್ಲೈಮ್ಗಳು, ಕ್ರಮಗಳು, ದಾವೆಗಳು ಅಥವಾ ವಿಚಾರಣೆಗಳಿಂದ ರಕ್ಷಿಸಲು, ಕಾಪಾಡಲು ಮತ್ತು ಹಾನಿಯಿಂದ ದೂರವಿರಿಸಲು ನೀವು ಒಪ್ಪುತ್ತೀರಿ.
8.7 ಉತ್ಪನ್ನವನ್ನು ನ್ಯೂಕ್ಲಿಯರ್ ಸೌಲಭ್ಯಗಳ, ಲೈಫ್ ಸಪೋರ್ಟ್ ಸಿಸ್ಟಂಗಳ, ಎಮರ್ಜೆನ್ಸಿ ಕಮ್ಯುನಿಕೇಷನ್ಗಳ, ಏರ್ಕ್ರಾಫ್ಟ್ ನ್ಯಾವಿಗೇಷನ್ ಅಥವಾ ಕಮ್ಯುನಿಕೇಷನ್ ಸಿಸ್ಟಂಗಳ, ಏರ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಂಗಳ ಅಥವಾ ಉತ್ಪನ್ನದ ವಿಫಲತೆಯು ಸಾವು, ವೈಯಕ್ತಿಕ ಗಾಯ ಅಥವಾ ತೀವ್ರ ದೈಹಿಕ ಅಥವಾ ಪರಿಸರ ಹಾನಿಗೆ ಕಾರಣವಾಗಬಹುದಾದಂತಹ ಯಾವುದೇ ಇತರ ಚಟುವಟಿಕೆಗಳ ಕಾರ್ಯಾಚರಣೆಯಲ್ಲಿ ಬಳಸಲು ಉದ್ದೇಶಿಸಲಾಗಿರುವುದಿಲ್ಲ.
8.8 ಈ ನಿಯಮಗಳು ಮತ್ತು ನಿಬಂಧನೆಗಳು ಹಾಗೂ ರೆಫರೆನ್ಸ್ ಪ್ರಕಾರ ಇನ್ಕಾರ್ಪೋರೇಟ್ ಮಾಡಲಾದ ಇತರ ಯಾವುದೇ ನಿಯಮಗಳು ಉತ್ಪನ್ನಕ್ಕೆ ಸಂಬಂಧಿಸಿದ ನಿಮ್ಮ ಮತ್ತು Google ನಡುವಿನ ಸಂಪೂರ್ಣ ಒಪ್ಪಂದವನ್ನು ರಚಿಸುತ್ತವೆ ಮತ್ತು ಉತ್ಪನ್ನದ ನಿಮ್ಮ ಬಳಕೆಯನ್ನು ನಿಯಂತ್ರಿಸುತ್ತವೆ ಮತ್ತು ಉತ್ಪನ್ನಕ್ಕೆ ಸಂಬಂಧಿಸಿದಂತೆ ನಿಮ್ಮ ಮತ್ತು Google ನಡುವಿನ ಯಾವುದೇ ಪೂರ್ವ ಅಥವಾ ಏಕಕಾಲದಲ್ಲಿ ಜರುಗುವ ಒಪ್ಪಂದಗಳನ್ನು ಸಂಪೂರ್ಣವಾಗಿ ಬದಲಾಯಿಸುತ್ತವೆ.
8.9 ಯಾವುದೇ ಅಧಿಕಾರ ಕ್ಷೇತ್ರದಲ್ಲಿ ನಿಷೇಧಾಜ್ಞೆ ಪರಿಹಾರೋಪಾಯಗಳಿಗಾಗಿ (ಅಥವಾ ಸಮಾನ ರೀತಿಯ ತುರ್ತು ಕಾನೂನು ಪರಿಹಾರ) ಅರ್ಜಿ ಸಲ್ಲಿಸಲು Google ಗೆ ಅನುಮತಿಸಲಾಗುತ್ತದೆ ಎಂದು ನೀವು ಒಪ್ಪುತ್ತೀರಿ.